70 ವರ್ಷಗಳ ಬಳಿಕ ಬದಲಾದ ಪೊಲೀಸ್ ಕ್ಯಾಪ್ :ಸಿ ಎಂ ಸಿದ್ದರಾಮಯ್ಯರಿಂದ ವಿತರಣೆ
ಬೆಂಗಳೂರಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಇಂದು ಹೊಸ ಮಾದರಿಯ ಪಿ ಕ್ಯಾಪ್ ವಿತರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 70 ವರ್ಷಗಳ ಬಳಿಕ ಬದಲಾದ ಈ ಹೊಸ ಕ್ಯಾಪ್ ಗಳನ್ನು ಪೋಲಿಸ್ ಸಿಬ್ಬಂದಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ" ಡ್ರಗ್ಸ್ ಮುಕ್ತ ಕರ್ನಾಟಕ" ತಮ್ಮ ಗುರಿಯಾಗಿದ್ದು ಪೊಲೀಸ್ ಇಲಾಖೆಯು ಇದೇ ನಿಲುವು ತಳೆಯಬೇಕು ಎಂದು ಕರೆ ನೀಡಿದರು.
ಇತರೆ ಸುದ್ದಿಗಳು