ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
15-11-2025
ಯದಲಾಪೂರದಲ್ಲಿ ಕುಡಿಯುವ ನೀರಿನ ದಾಹ: ತಿಂಗಳಿನಿಂದ ಬೋರ್‌ವೆಲ್ ದುರಸ್ಥಿ ನಿಲುವಿನಿಂದ ಗ್ರಾಮಸ್ಥರ ಸಂಕಷ್ಟ
ಬೀದರ್: ಯದಲಾಪೂರ ಗ್ರಾಮದ ವಾರ್ಡ್ ಸಂಖ್ಯೆ 1 (ಎಸ್.ಸಿ. ವಾರ್ಡ್) ನಲ್ಲಿ ಕುಡಿಯುವ ನೀರಿನ ಪೂರೈಕೆಗೆ ಬಳಸಲಾಗುವ ಬೋರ್‌ವೆಲ್ ಸುಮಾರು ಒಂದು ತಿಂಗಳಿಂದ ಕಾರ್ಯರಹಿತವಾಗಿದ್ದು, ಗ್ರಾಮಸ್ಥರು ತೀವ್ರ ನೀರಿನ ಅಭಾವಕ್ಕೆ ತುತ್ತಾಗಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷ ಸುಧಾಕರ್ ಕೋಟೆ ಅವರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಯಲ್ಲಿ, “ಒಂದು ತಿಂಗಳಿನಿಂದ ಸಮಸ್ಯೆ ಪರಿಹರಿಸುವ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಕರ್ತವ್ಯ ಲೋಪವನ್ನು ಸ್ಪಷ್ಟಪಡಿಸುತ್ತದೆ. ನೀರು ದೊರೆಯದೆ ಜನರು ದಿನನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಅವರು, ಬೋರ್‌ವೆಲ್ ದುರಸ್ಥಿ ಕಾರ್ಯಕ್ಕೆ ತಕ್ಷಣ ಕೈಹಾಕಿ, ಗ್ರಾಮದಲ್ಲಿ ನಿರಂತರ ನೀರು ಪೂರೈಕೆಯನ್ನು ಪುನಃ ಸ್ಥಾಪಿಸುವಂತೆ ಸಂಬಂಧಿತ ಇಲಾಖೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಜೊತೆಗೆ, ದುರಸ್ಥಿ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
