ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?
ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್ | ಸ್ಥಳ : ಬೆಂಗಳೂರು | ದಿನಾಂಕ : 16-05-2025

ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

ನವದೆಹಲಿ: ಜಮ್ಮು & ಕಾಶ್ಮೀರದಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ 6 ಉಗ್ರರನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿತು. ಭಯೋತ್ಪಾದಕರನ್ನು ಮಟ್ಟ ಹಾಕಿದ್ದೇ ರಣರೋಚಕ.

ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ 48 ಗಂಟೆಗಳ ಒಳಗೆ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಭಯೋತ್ಪಾದಕರನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಸರ್ಪಚ್ ಹತ್ಯೆಯಲ್ಲಿ, ಎನ್‌ಕೌಂಟರ್‌ ಆದ ಭಯೋತ್ಪಾದಕರಲ್ಲಿ ಒಬ್ಬ ಭಾಗಿಯಾಗಿದ್ದ. ಭಯೋತ್ಪಾದಕರು ಎಲ್ಲೇ ಅಡಗಿಕೊಂಡರೂ, ನಾವು ಅವರನ್ನು ಪತ್ತೆಹಚ್ಚಿ ನಾಶಪಡಿಸುತ್ತೇವೆ ಎಂದು ಜಿಒಸಿ ವಿ ಫೋರ್ಸ್‌ನ ಮೇಜರ್ ಜನರಲ್ ಧನಂಜಯ್ ಜೋಶಿ ಹೇಳಿದ್ದಾರೆ.

ಉಗ್ರರ ಎನ್‌ಕೌಂಟರ್‌ ನಡೆದಿದ್ಹೇಗೆ?‌:

ಆಪರೇಷನ್‌ ಕೆಲ್ಲಾರ್‌ : ಕೆಲ್ಲಾರ್‌ನ ಎತ್ತರದ ಪ್ರದೇಶಗಳಲ್ಲಿ ಭಯೋತ್ಪಾದಕ ಗುಂಪು ಇರುವ ಬಗ್ಗೆ ಮೇ 12 ರಂದು ಸೇನೆಗೆ ಮಾಹಿತಿ ಸಿಕ್ಕಿತ್ತು. ಮರುದಿನ ಬೆಳಗ್ಗೆ, ಕೆಲವು ಚಲನವಲನಗಳನ್ನು ಕಂಡ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದವು. ಆದರೆ, ಉಗ್ರರು ಗುಂಡು ಹಾರಿಸುವ ಮೂಲಕ ಪ್ರತಿಕ್ರಿಯಿಸಿದರು. ಟ್ರಾಲ್‌ನಲ್ಲಿ ಎರಡನೇ ಕಾರ್ಯಾಚರಣೆಯನ್ನು ಗಡಿ ಗ್ರಾಮದಲ್ಲಿ ನಡೆಸಲಾಯಿತು.

ನಾವು ಈ ಹಳ್ಳಿಯನ್ನು ಸುತ್ತುವರೆದಾಗ, ಭಯೋತ್ಪಾದಕರು ಬೇರೆ ಬೇರೆ ಮನೆಗಳಲ್ಲಿ ನೆಲೆಸಿ ನಮ್ಮ ಮೇಲೆ ಗುಂಡು ಹಾರಿಸಿದರು. ಈ ಸಮಯದಲ್ಲಿ ನಾಗರಿಕ ಗ್ರಾಮಸ್ಥರನ್ನು ರಕ್ಷಿಸುವುದು ನಮಗೆ ಸವಾಲಾಗಿತ್ತು. ಕೊನೆಗೂ ಭಯೋತ್ಪಾದಕರನ್ನು ಎನ್‌ಕೌಂಟರ್‌ ಮಾಡಿದೆವು. ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಒಬ್ಬ ಶಾಹಿದ್ ಕುಟ್ಟೆ, ಜರ್ಮನ್ ಪ್ರವಾಸಿಯ ಮೇಲಿನ ದಾಳಿ ಸೇರಿದಂತೆ ಎರಡು ಪ್ರಮುಖ ದಾಳಿಗಳಲ್ಲಿ ಭಾಗಿಯಾಗಿದ್ದ. ಹಣಕಾಸು ಚಟುವಟಿಕೆಗಳಲ್ಲಿಯೂ ಕೈಜೋಡಿಸಿದ್ದ ಎಂದು ಮೇಜರ್ ಜನರಲ್ ಜೋಶ್‌ಜಿ ಹೇಳಿದ್ದಾರೆ.

ಆಪರೇಷನ್ ಟ್ರಾಲ್‌: ಕಠಿಣ ಭೂಪ್ರದೇಶದಲ್ಲಿ ನಡೆದ ಟ್ರಾಲ್ ಕಾರ್ಯಾಚರಣೆಯಲ್ಲಿ ಸೇನೆಯು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿಗಳು ಇಂದು ನಡೆದ ಬ್ರೀಫಿಂಗ್‌ನಲ್ಲಿ ತಿಳಿಸಿದ್ದಾರೆ.

ಪುಲ್ವಾಮಾದಲ್ಲಿ ಒಂದು ಹಳ್ಳಿಯಲ್ಲಿ ಮೂವರು ಭಯೋತ್ಪಾದಕರು ಅಡಗಿಕೊಂಡಿರುವ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿತು. ಸೇನೆಯು ಮೊದಲು ಎಲ್ಲಾ ನಾಗರಿಕರನ್ನು ಸ್ಥಳಾಂತರಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಟ್ರಾಲ್ ಕಾರ್ಯಾಚರಣೆ ಅರಣ್ಯದ ಎತ್ತರದ ಪ್ರದೇಶದಲ್ಲಿ ನಡೆದರೆ, ಪುಲ್ವಾಮಾ ಕಾರ್ಯಾಚರಣೆ ಗ್ರಾಮದಲ್ಲಿ ತುಲನಾತ್ಮಕವಾಗಿ ಸಮತಟ್ಟಾದ ಭೂಪ್ರದೇಶದಲ್ಲಿ ನಡೆಯಿತು. ಪುಲ್ವಾಮಾ ಗ್ರಾಮದಲ್ಲಿ ಮೂವರು ಭಯೋತ್ಪಾದಕರನ್ನು ಸೇನೆ ಬಗ್ಗುಬಡಿಯಿತು.

ಪುಲ್ವಾಮಾದಲ್ಲಿ ಹತ್ಯೆಗೀಡಾದ ಮೂವರು ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಸೇರಿದವರು. ಉಗ್ರರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49029+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49062+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49063+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49091+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49256+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49323+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49444+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49629+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49574+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49741+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49746+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49763+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49760+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49785+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49806+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51264+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51349+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51673+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51678+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52111+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52096+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57055+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57037+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57047+