ಹುಲಿಗೆ ಇಟ್ಟ ಬೋನಿಗೆ ಚಿರತೆ ಬಿದ್ದು ಅಚ್ಚರಿ — ಬಂಡೀಪುರದಲ್ಲಿ ಘಟನೆ
ಚಾಮರಾಜನಗರ : ಹುಲಿಗೆ ಸೆರೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದು ಅಚ್ಚರಿಮೂಡಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶ ಬೇರಂಬಾಡಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಾಡಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹುಲಿ ಉಪಟಳ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಮತ್ತು ರೈತರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯವರನ್ನು ದಂಬಾಲು ಬಿದ್ದಿದ್ದರು.
ಬಂಡೀಪುರ ಅರಣ್ಯಾಧಿಕಾರಿಗಳು ಸಿಬ್ಬಂದಿಗಳ ನೆರವಿನೊಂದಿಗೆ ರೈತರು ಮತ್ತು ಗ್ರಾಮಸ್ಥರುಗಳಿಗೆ ಉಪಟಳ ನೀಡುತ್ತಿದ್ದ ಹುಲಿ ಸೆರೆಗೆಂದು ಬೋನ್ ಇಟ್ಟಿದ್ದರು. ಅದರಲ್ಲಿ ಜೀವಂತ ಮೇಕೆಯನ್ನು ಇರಿಸಿದ್ದರು.
ಆದರೆ ಹುಲಿ ಬೀಳಬೇಕಿದ್ದ ಬೋನಿಗೆ ಚಿರತೆ ಬಿದ್ದಿದ್ದು ಅಚ್ಚರಿಯಾಗಿದೆ. ಆದರೂ ವನ್ಯ ಪ್ರಾಣಿಯೊಂದು ಬೋನಿಗೆ ಬಿದ್ದಿದ್ದರಿಂದ ರೈತರು ತುಸು ನಿಟ್ಟುಸಿರು ಬಿಟ್ಟರು. ಸೆರೆ ಸಿಕ್ಕ ಚಿರತೆಯನ್ನು ಬೇರೆಡೆ ಸಾಗಿಸಲಾಗಿದ್ದು, ಹುಲಿ ಸೆರೆಗೆ ಮತ್ತೇ ಬೋನನ್ನು ಬಳಸಿಕೊಂಡಿದ್ದಾರೆ. ಅದರೆ ಅದರಲ್ಲಿ ಇಟ್ಟಿದ್ದ ಮೇಕೆ ಮೃತಪಟ್ಟಿದ್ದು ಕಂಡು ಬಂತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು