ಗ್ರಾಮಗಳು ಸ್ವಾವಲಂಬಿಯಾಗುವುದರಿಂದ ಕರ್ನಾಟಕವು ಸದೃಢವಾಗುತ್ತದೆ.
ಮಹಾತ್ಮ ಗಾಂಧಿಯವರ “ಗ್ರಾಮರಾಜ್ಯ“ದ ಕನಸು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಕ್ತಿಯುತಗೊಳಿಸುವ ಹಾಗೂ ದೇಶದ ಕಟ್ಟ ಕಡೆಯ ವ್ಯಕ್ತಿಯ ಬದುಕನ್ನು ಸಂಪನ್ನಗೊಳಿಸುವ ಆಶಯ ಹೊಂದಿತ್ತು.
ಮಹಾತ್ಮ ಗಾಂಧಿಯವರ ಆಶಯದಂತೆ ನಮ್ಮ ಸರ್ಕಾರವು ಗ್ರಾಮೀಣಾಭಿವೃದ್ಧಿ ಇಲಾಖೆ ಗಣನೀಯ ಸಾಧನೆಗಳತ್ತ ಹೆಜ್ಜೆ ಹಾಕಿದೆ.
ಪಂಚಾಯತ್ ರಾಜ್ ವಿಕೇಂದ್ರಿಕರಣದಲ್ಲಿ ಕರ್ನಾಟಕವು ದೇಶದಲ್ಲಿ ಪ್ರಥಮ ಸ್ಥಾನಕ್ಕೇರಿದೆ ➧ ₹1,273.34 ಕೋಟಿ ತೆರಿಗೆ ಸಂಗ್ರಹದ ಮೂಲಕ ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಒತ್ತು ನೀಡಿದೆ
ಒಟ್ಟು ₹6,200 ಕೋಟಿ ವೆಚ್ಚದ ಕಲ್ಯಾಣ ಪಥ, ಪ್ರಗತಿ ಪಥ ಯೋಜನೆಗಳ ಮೂಲಕ ಗ್ರಾಮೀಣ ಕರ್ನಾಟಕದ 8,260 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ➧ 20 ಲಕ್ಷ ಗ್ರಾಮೀಣ ಆಸ್ತಿಗಳನ್ನು ಸೃಜಿಸಲಾಗಿದೆ
ನರೇಗಾ ಕೂಲಿ ಮೊತ್ತವನ್ನು ₹370ಕ್ಕೆ ಹೆಚ್ಚಿಸಲಾಗಿದೆ ➧ 5,762 ಗ್ರಾಮೀಣ ಗ್ರಂಥಾಲಯಗಳನ್ನು ಡಿಜಿಟಲ್ ಸ್ಪರ್ಶ ನೀಡಿ ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ
ಪಂಚತಂತ್ರ 2.0 ತಂತ್ರಾಂಶದಲ್ಲಿ 1.49 ಕೋಟಿ ಅಸ್ತಿಗಳ ನೋಂದಣಿ ➧ ಬಾಪೂಜಿ ಸೇವಾ ಕೇಂದ್ರದಲ್ಲಿ 81 ಸರ್ಕಾರಿ ಸೇವೆಗಳನ್ನು ನೀಡಲಾಗುತ್ತಿದೆ ➧ ಜಲ ಜೀವನ್ ಮಿಷನ್ ಯೋಜನೆಗೆ ರಾಜ್ಯ ಸರ್ಕಾರದಿಂದ ₹22,624 ಕೋಟಿ ಅನುದಾನ ಒದಗಿಸಲಾಗಿದೆ
ರಾಜ್ಯದಲ್ಲಿ 3,888 ಕೂಸಿನ ಮನೆಗಳನ್ನು ನಿರ್ಮಿಸಲಾಗಿದೆ ➧ 26,484 ಗ್ರಾಮಗಳ ಬೂದು ನೀರು ನಿರ್ವಹಣೆ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ
ನೀರಿನ ಮಾದರಿ ಪರೀಕ್ಷೆಗಾಗಿ ಜೀವ ಜಲ ಅಪ್ಲಿಕೇಶನ್ ಮತ್ತು ಪೋರ್ಟಲ್ ಅಭಿವೃದ್ಧಿಪಡಿಸಿ 34,056 ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಪ್ರಿಯಾಂಕಾ ಖರ್ಗೆ
ಇತರೆ ಸುದ್ದಿಗಳು