ಮಮತೆ ಹಂಚುವ ಯೋಜನೆ ನಮ್ಮ ‘ಕೂಸಿನ ಮನೆ’.
ಯಾವುದೇ ಒಂದು ಯೋಜನೆಯು ಯಶಸ್ವಿ ಎನಿಸಿಕೊಳ್ಳಬೇಕಾದರೆ ಹಲವು ಆಯಾಮಗಳಲ್ಲಿ ಅದರ ಪ್ರಯೋಜನಗಳು ಜನತೆಗೆ ದೊರಕಬೇಕು. ಇಂತಹ ಬಹುಪಯೋಗಿ ಯೋಜನೆಯೇ ಕೂಸಿನ ಮನೆ.
ಗ್ರಾಮೀಣ ಪ್ರದೇಶದ ಕಾರ್ಮಿಕ ಮಹಿಳೆಯರ ಮಕ್ಕಳ ಆರೈಕೆಗಾಗಿ ಇರುವ ಈ ಕೂಸಿನ ಮನೆಯಿಂದಾಗಿ ಮಹಿಳೆಯರು ನಿರಾತಂಕವಾಗಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ, ನರೇಗದಂತಹ ಯೋಜನೆಯ ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆ ಕುಟುಂಬದ ಆರ್ಥಿಕ ಮಟ್ಟ ಸುಧಾರಣೆಯಾಗಲಿದೆ. ಕೂಸಿನ ಮನೆಯಲ್ಲಿ ಒದಗಿಸುವ ಆಹಾರದಿಂದ ಮಕ್ಕಳ ಪೌಷ್ಟಿಕತೆಯ ಕೊರತೆ ನೀಗುತ್ತಿದೆ.
ಮಕ್ಕಳಿಗೆ ಸುರಕ್ಷಿತ ವಾತಾವರಣ ಒದಗಿಸುವ ಕೂಸಿನ ಮನೆಗಳು ಆಟ ಪಾಠಗಳಿಂದ ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗುತ್ತಿವೆ.
ಯೋಜನೆ ಒಂದು, ಪ್ರಯೋಜನ ಹಲವು ಎನ್ನುವಂತೆ ಕೂಸಿನ ಮನೆಗಳು ಹಳ್ಳಿಗರ ಭರವಸೆಯ ಮನೆಗಳಾಗಿವೆ.
ಇತರೆ ಸುದ್ದಿಗಳು