ಆಂಬುಲೆನ್ಸ್‌ನಲ್ಲೇ ಹೆರಿಗೆ: ಹನೂರು ಸಮೀಪ ಹೆಣ್ಣು ಮಗುವಿಗೆ ಜನ್ಮ
ಚಾಮರಾಜನಗರ :ಹೆರಿಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ, ಆಂಜನೇಯಸ್ವಾಮಿ ದೇವಾಲಯ ಬಳಿ ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೊರವಲಯದ ಎಲ್ಲೆಮಾಳ ಮುಖ್ಯರಸ್ತೆಯ ಕಣಿವೆ ಆಂಜನೇಯಸ್ವಾಮಿ ದೇವಾಲಯದ ಬಳಿ ಆಂಬುಲೇನ್ಸ್ ನಲ್ಲಿಯೆ ಗರ್ಭಿಣಿ ಮಹಿಳೆಯೋರ್ವೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಚಾಮರಾಜನಗರ ಜಿಲ್ಕುಲೆಯ ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮದ ಶಿಲ್ಪಾ ಪುರುಷೊತ್ತಮ್ ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಈ ವೇಳೆ ಆಂಬುಲೆನ್ಸ್ ನಲ್ಲಿ ಕೌದಳ್ಳಿ ಆಸ್ಪತ್ರೆಗೆ ಕರೆದುಕೊಂಡು ತದನಂತರ ಅಲ್ಲಿಯ ವೈದ್ಯರ ಸಲಹೆಯಂತೆ ಕೊಳ್ಳೇಗಾಲಕ್ಕೆ ಬರುವಾಗ ಮಾರ್ಗೆಮಧ್ಯೆದಲ್ಲಿ ಹನೂರು ತಾಲೂಕಿನ ಎಲ್ಲೆಮಾಳ ಸಮೀಪದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ವೇಳೆ ಅಂಬುಲೆನ್ಸ್ ಅಲ್ಲಿ ಸೇವೆ ಸಲ್ಲಿಸಿದಂತಹ ಆಂಬುಲೇನ್ಸ್ ಸಿಬ್ಬಂದಿ ರಾಣಿ ಸೇರಿದಂತೆ ನಾಗಾರಾಜು ಸಮಯಪ್ರಜ್ಞೆಯಿಂದ ಸಕಾಲಕ್ಕೆ ಚಿಕಿತ್ಸೆಗಾಗಿ ಕೊಳ್ಳೇಗಾಲ ಆಸ್ಪತ್ರೆಗೆ ರವಾನಿಸಿರುವ ಬಗ್ಗೆ ಕುಟುಂಬಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು