“ದಾವಣಗೆರೆಯಲ್ಲಿ ‘ರಂಗ ತಾಂಡವ’ ಉದ್ಘಾಟನೆ; ‘ಕಣಿವೆಯ ಹಾಡು’ ನಾಟಕ ಪ್ರೇಕ್ಷಕರ ಮನಸೆಳೆಯಿತು”
ದಾವಣಗೆರೆ, ನ.16: ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ರವಿವಾರ ಸಂಜೆ ರಂಗ ತಾಂಡವ ಸಂಸ್ಥೆಯ ಉದ್ಘಾಟನೆಯೊಂದಿಗೆ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್, ಹಿರಿಯ ರಂಗ ಕಲಾವಿದ ಚಿಂದೋಡಿ ಬಂಗಾರೇಶ, ಪ್ರಸಿದ್ಧ ರಂಗ ನಿರ್ದೇಶಕ ಶ್ರೀಪಾದ ಭಟ್ ಅವರಿಂದ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಡ್ಯ ರಮೇಶ್, ಮಕ್ಕಳಿಗೆ ಧ್ವನಿಯ ಏರಿಳಿತ, ಅಭಿನಯ ಪರಿಚಯ ಮಾಡಿಕೊಡುವಂತೆ, ರಜೆಗಳಲ್ಲಿ ರಂಗಶಿಬಿರಗಳಿಗೆ ಸೇರಿಸುವಂತೆ ಪೋಷಕರಿಗೆ ಮನವಿ ಮಾಡಿದರು. “ರಂಗಭೂಮಿ ಎಲ್ಲರನ್ನೂ ಅಪ್ಪಿಕೊಳ್ಳುವ ವೇದಿಕೆ; ಎಲ್ಲರೂ ರಂಗಸ್ನೇಹಿತರಾಗಬೇಕು,” ಎಂದು ಹೇಳಿದರು.
ನಂತರ ಮೈಸೂರಿನ ನಟನ ತಂಡದ ‘ಕಣಿವೆಯ ಹಾಡು’ ನಾಟಕ ವೇದಿಕೆ ಕಂಡಿತು. ಮೇಘ ಸಮೀರ ಮತ್ತು ದಿಶಾ ರಮೇಶ್ ಅವರ ಅಭಿನಯ ಪ್ರೇಕ್ಷಕರನ್ನು ಸಂಪೂರ್ಣವಾಗಿ ತಳಿ ಮರೆಯುವಂತೆ ಮಾಡಿತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು