₹500 ಕೋಟಿಗೂ ಅಧಿಕ ಮೊತ್ತದ ಚಡಚಣ ಏತ ನೀರಾವರಿ ಯೋಜನೆ ಕಳಪೆ! ಸಂಸದ ರಮೇಶ್ ಜಿಗಜಣಗಿ
ವಿಜಯಪುರ: ರೈತರ ಕನಸಿನ ಚಡಚಣ ಏತ ನೀರಾವರಿ ಯೋಜನೆ ಇನ್ನೂ ಪೂರ್ಣಗೊಳ್ಳದೇ ಆಕ್ರೋಶ ವ್ಯಕ್ತವಾಗಿದೆ. ₹500 ಕೋಟಿಗೂ ಅಧಿಕ ಮೊತ್ತ ವೆಚ್ಚವಾದರೂ ರೈತರ ಹೊಲಕ್ಕೆ ಹನಿ ನೀರು ಹರಿದಿಲ್ಲ. ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ರಮೇಶ ಜಿಗಜಿಣಗಿ ಅವರು, “ಇನ್ನೊಂದು ತಿಂಗಳ ಒಳಗಾಗಿ ಯೋಜನೆ ಪೂರ್ಣಗೊಳ್ಳದಿದ್ದರೆ ಚಡಚಣ ತಹಶೀಲ್ದಾರ್ ಕಚೇರಿ ಎದುರು ರೈತರೊಂದಿಗೆ ಧರಣಿ ಕೂತು ಹೋರಾಟ ಆರಂಭಿಸುತ್ತೇನೆ” ಎಂದು ಎಚ್ಚರಿಕೆ ನೀಡಿದರು. --- ಅಪೂರ್ಣ ಕಾಮಗಾರಿಗಳ ವಿವರ: 2017ರಲ್ಲಿ ಆರಂಭ → 2020ಕ್ಕೆ ಪೂರ್ಣಗೊಳ್ಳಬೇಕಾಗಿತ್ತು, ಆದರೆ ಇಂದಿಗೂ ಅಪೂರ್ಣ. ಲಿಫ್ಟ್ ಹೆಡ್ ವರ್ಕ್ಸ್: ಬೆಳಗಾವಿಯ ಆದಿತ್ಯ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ₹109.24 ಕೋಟಿಗೆ ಪಡೆದಿದ್ದು, 2019ರಲ್ಲೇ ಪೂರ್ಣಗೊಳ್ಳಬೇಕಿತ್ತು. 2029ರವರೆಗೆ ನಿರ್ವಹಣೆ ಮಾಡಬೇಕಾಗಿತ್ತು, ಆದರೆ ಪೂರ್ಣವಾಗಿಲ್ಲ. ಪೈಪ್ ವಿತರಣೆ ಜಾಲ: ವಿಜಯಪುರದ ಜಿ. ಶಂಕರ್ ಅವರಿಗೆ ₹186.05 ಕೋಟಿಗೆ ನೀಡಲಾಗಿತ್ತು. 2020ರೊಳಗೆ ಮುಗಿಯಬೇಕಿತ್ತು. ಆದರೆ ಕಳಪೆ ಗುಣಮಟ್ಟದ ಪೈಪ್ ಅಳವಡಿಸಿದ್ದು, ಎಲ್ಲೆಡೆ ಒಡೆದು ಹೋಗಿವೆ. --- ರೈತರ ಬೇಡಿಕೆಗಳು: ✅ ಯೋಜನೆ ತ್ವರಿತ ಪೂರ್ಣಗೊಳಿಸಬೇಕು ✅ ಕಳಪೆ ಕಾಮಗಾರಿಗೆ ತನಿಖೆ ನಡೆಸಬೇಕು ✅ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ಇತರೆ ಸುದ್ದಿಗಳು