ಜಮಖಂಡಿ: ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ರಾಜಿ ಪಂಚಾಯಿತಿಯಲ್ಲಿ ಗಲಾಟೆ – ಪಿಎಸ್ಐ ಮೇಲೆ ಹಲ್ಲೆ, ೨೦ ಮಂದಿಗೆ ಎಫ್ಐ
ಬಾಗಲಕೋಟೆ ಜಿಲ್ಲೆ, ಜಮಖಂಡಿ ತಾಲ್ಲೂಕು, ಕಲಹಳ್ಳಿ ಗ್ರಾಮದಲ್ಲಿ ಜೈನ ಸಮುದಾಯದ ಹುಡುಗಿ ಮತ್ತು ಮುಸ್ಲಿಂ ಸಮುದಾಯದ ಹುಡುಗನ ಪ್ರೇಮ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದ್ದು, ರಾಜಿ ಪಂಚಾಯಿತಿಯ ವೇಳೆ ಎರಡು ಕುಟುಂಬಗಳ ನಡುವೆ ಉಂಟಾದ ಗಲಾಟೆಯಲ್ಲಿ ಪಿಎಸ್ಐ ಜಿ.ಎಮ್. ಪೂಜಾರಿ ಮೇಲೆಯೇ ಹಲ್ಲೆಯಾಗಿದೆ.
ಸ್ಥಳೀಯ ಹಿರಿಯರು ಪ್ರೇಮಿಗಳ ವಿಚಾರದಲ್ಲಿ ರಾಜಿ ಮಾಡಲು ಮುಂದಾದಾಗ, ಹುಡುಗ ಮತ್ತು ಹುಡುಗಿಯ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಮುಂದಾಗಿ ಗಲಾಟೆ ಸಂಭವಿಸಿದೆ. ಈ ಗಲಾಟೆಯನ್ನು ನಿಯಂತ್ರಿಸಲು ಸ್ಥಳಕ್ಕಾಗಮಿಸಿದ ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರು ಕೆಲವು ಮಂದಿಯನ್ನು ವಶಕ್ಕೆ ಪಡೆದರು. ಇದರಿಂದ ಆಕ್ರೋಶಗೊಂಡ ಭುಜಬಲಿ ಹನುಮನಗೌಡ್ರ (55) ಎಂಬ ವ್ಯಕ್ತಿ, ಪಿಎಸ್ಐ ಪೂಜಾರಿಯವರಿಗೆ ಚಹಾ ಕಿತ್ತಲಿಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಪಿಎಸ್ಐ ಪೂಜಾರಿಯವರು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ವಸತಿ ಗೃಹದಲ್ಲಿ ವಿಶ್ರಾಂತಿಯಲ್ಲಿದ್ದಾರೆ.
ಪೊಲೀಸರು ಗಲಾಟೆ ಹಾಗೂ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ 20 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಇವರಲ್ಲಿ 6 ಮಹಿಳೆಯರು ಸಹ ಇದ್ದಾರೆ. 14 ಜನರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ 6 ಮಹಿಳೆಯರಿಗೆ ನೋಟಿಸ್ ನೀಡಿ ತಲುಪಿಸಲಾಗಿದೆ
ಇತರೆ ಸುದ್ದಿಗಳು