ಜನವರಿ 3 ಇಂದು ಸಂಜೆ ಬಾನಂಗಳದಲ್ಲಿ ಸೂಪರ್ ಮೂನ್
ಜನವರಿ ಮೂರರಂದು ಬಾನಂಗಳದಲ್ಲಿ ಚಂದಿರ ಸೂಪರ್ ಮೂನ್ ಆಗಿ ಕಾಣಿಸಲಿದ್ದಾನೆ.
ಪ್ರತಿ ತಿಂಗಳ ಹುಣ್ಣಿಮೆಯಂದು ಸಹಜವಾಗಿ ಚಂದಿರ ಗೋಲಾಕಾರಲ್ಲಿ ಪ್ರಕಾಶಮಾನವಾಗಿ ಕಾಣಿಸುವುದು ಸಹಜ ಪ್ರಕ್ರಿಯೆ. ಆದರೆ ಈ ಬಾರಿ ಚಂದಿರ ಭೂಮಿಯ ಸುತ್ತ ಅಂಡಾಕಾರದಲ್ಲಿ ಸುತ್ತುವ ದೂರದ ಪ್ರಮಾಣ ಕಡಿಮೆಯಾಗಿರುತ್ತದೆ ಅದನ್ನ ಪರಿಜಿ ಎಂದು ಕರೆಯುತ್ತಾರೆ. ಈ ಕಾರಣದಿಂದ ಭೂಮಿಯ ವಾಯುಪದರಲ್ಲಿ ಬಣ್ಣಗಳು ಚದುರಿ ಅದರಿಂದಾಚೆಗೆ ಚಂದಿರ ಮೊದಲು ಕೆಂಪು ಹಾಗೆ ತದನಂತರ ಕಿತ್ತಳೆ ಬಣ್ಣದಿಂದ ಗೋಚರಿಸಲಿದ್ದಾನೆ.
ಇದು ಹೊಸ ವರ್ಷ 2026 ರ ಮೊದಲ ಸೂಪರ್ ಮೂನ್ ಆಗಿದ್ದು ಇದನ್ನ ಅಮೆರಿಕದಂತ ಪಾಶ್ಚಾತ ರಾಷ್ರ್ಟಗಳಲ್ಲಿ ವೋಲ್ಪ್ ಮೂನ್ ಎಂತಲೂ ಕರೆಯುತ್ತಾರೆ. ಜನವರಿ ತಿಂಗಳಲ್ಲಿ ಶೀತ ವಾತಾವಣವಿದ್ದು ಈ ಸಮಯದಲ್ಲಿ ತೋಳಗಳು ಕೂಗುವುದು ಸಾಮಾನ್ಯ ಇದೇ ಸಮಯದಲ್ಲಿ ಸಂಭವುಸುವ ಪ್ರಕರವಾಗಿ ಕಂಡು ಬರುವ ಚಂದಿರನನ್ನು ಸೂಪರ್ ವೋಲ್ಪ್ ಮೂನ್ ಎಂದು ಕರೆಯುತ್ತಾರೆ.
ಇತರೆ ಸುದ್ದಿಗಳು