ಅಧಿಕಾರಿಗಳ ನಡೆ ವಸತಿ ನಿಲಯದ ಕಡೆ
ಕೊಣ್ಣೂರು ಸರ್ಕಾರಿ ವಸತಿ ನಿಲಯದಲ್ಲಿ ವಿನೂತನ ಕಾರ್ಯಕ್ರಮ. ತಾಳಿಕೋಟಿ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಶುಕ್ರವಾರ ಅಧಿಕಾರಿಗಳ ನಡೆ ವಸತಿ ನಿಲಯದ ಕಡೆ ಎಂಬ ವಿನೂತನ ಕಾರ್ಯಕ್ರಮ ಜರುಗಿತು. ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಶಿವಲಿಂಗ ಹಚಡದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಉಪನಿರ್ದೇಶಕ ಅರವಿಂದ ಲಂಬು ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಪ್ರಾಧ್ಯಾಪಕ ಹಂಪಣ್ಣ ಅವರು ಮಾತನಾಡಿ ಸಮಾಜದಲ್ಲಿರುವ ದೀನ, ದಲಿತ, ಹಿಂದುಳಿದ ವರ್ಗಗಳ ಬಡಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಅವರನ್ನು ಆರ್ಥಿಕವಾಗಿ ಸಬಲೀಕರಿಸುವುದರ ಜೊತೆಗೆ ಸಮಾಜದ ಸತ್ಪ್ರಜೆಯನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರ ಇಂತಹ ವಸತಿ ನಿಲಯಗಳನ್ನು ಸ್ಥಾಪಿಸಿದೆ, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀ ವಿಜಯಕುಮಾರ ಉತ್ನಾಳ, ತಾಲೂಕಿನ ನಿಲಯ ಪಾಲಕರಾದ ಎಸ್.ಜಿ.ವಾಲಿಕಾರ, ಎಸ್. ಎನ್. ಮಲ್ಲಾಡೆ, ವಿ.ಎನ್. ಕೋರಿ, ಎಸ್.ಎಂ.ಕಲ್ಬುರ್ಗಿ, ಎಂ.ಎಸ್. ತಾಳಿಕೋಟಿ, ಎಸ್.ಎನ್.ಭಾಸಗಿ,ಎಸ್.ಟಿ.ಸಲಗರ, ಎನ್.ಸಿ.ಗುಡಗುಂಟಿ, ನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು..
ಇತರೆ ಸುದ್ದಿಗಳು