ಹೊಸ ವರ್ಷಕ್ಕೆ ಉದ್ಯಾನನಗರಿ ಸಜ್ಜು. ಬಿಗಿ ಬಂದೋಬಸ್ತ್
ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಉದ್ಯಾನ ನಗರಿ ಬೆಂಗಳೂರು ಸಕಲ ಸಿದ್ಧತೆಯೊಂದಿಗೆ ಸಜ್ಜಾಗುತ್ತಿದ್ದು ಜಗಮಗಿಸುವ ಬೆಳಕಿನಿಂದ ನಗರದ ಹೃದಯಭಾಗ ಎಂದೆಸಿಕೊಳ್ಳುವ ಎಮ್.ಜಿ ರಸ್ಯೆ ಬ್ರಿಗೇಡ್ ರಸ್ತೆಗಳಲ್ಲಿ ಪ್ರತಿ ಐವತ್ತು ಮೀಟರಿಗೊಂದರಂತೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಈ ಪೈಕಿ ಪೊಲೀಸ್ ಇಲಾಖೆ ಮತ್ತು ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕ್ಯಾಮರಾ ಕಣ್ಗಾವಲಿನಲ್ಲಿ ಭದ್ರತೆಗೆ ಆದ್ಯತೆ ನೀಡಲಾಗಿದೆ.
ಈ ಭಾರಿ ಹೊಸವರ್ಷದ ಆಚರಣೆಯ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು ಇಪ್ಪತ್ತು ಸಾವಿರ ಪೊಲಿಸರ ತಂಡ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ .
ವಿನೂತನ ಮಾದರಿಯ ವರ್ಷಾಚರಣೆಗೆ ಗ್ರೇಟರ್ ಬೆಂಗಳೂರು ಸಾಥ್
ಹೊಸ ವರ್ಷವನ್ನ ಮೋಜು ಮಸ್ತಿಯೊಂದಿಗೆ ಆಚರಿಸುವುದು ಸರ್ವೇಸಾಮಾನ್ಯ. ಆದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಯೋಗದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಗುಂಪು ನಡಿಗೆಯನ್ನು ವಿವಿಧ ಸಂಘಟನೆಯ ಮೂಲಕ ಹಮ್ಮಿಕೊಳ್ಳಲಾಗಿದೆ .
ವಾಕಲೂರು ಹೆಸರಿನ ಈ ಗುಂಪು ನಡಿಗೆ ಹೊಸ ವರ್ಷದಂದು ಆರೋಗ್ಯದ ಕುರಿತು ಜಾಗೃತಿ ಮೂಡಿಸಲಿದೆ. ಇದು ಜಗತ್ತಿನ ಅತೀ ದೊಡ್ಡ ಗುಂಪು ನಡಿಗೆ ಎಂಬ ಕೀರ್ತಿಗೆ ಪಾತ್ರವಾಗಲಿದೆ.
ಇತರೆ ಸುದ್ದಿಗಳು