ಅತಿಯಾದ ನಿದ್ರೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ: ತಜ್ಞರ ಎಚ್ಚರಿಕೆ"
ಆರೋಗ್ಯವಂತರಾಗಿರಲು ಸಮರ್ಪಕ ನಿದ್ರೆ ಬಹುಮುಖ್ಯ. ವೈದ್ಯರು ಪ್ರತಿದಿನ ಕನಿಷ್ಠ 7 ಗಂಟೆಗಳ ಗುಣಮಟ್ಟದ ನಿದ್ರೆ ಮಾಡುವುದು ಅಗತ್ಯವೆಂದು ಒತ್ತಿಹೇಳುತ್ತಿದ್ದಾರೆ. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ, ಪ್ರತಿದಿನ 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರಲ್ಲಿ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಂದಿದೆ. 79 ಅಧ್ಯಯನಗಳ ಆಧಾರ: ವಿಶ್ವದಾದ್ಯಾಂತ ನಡೆಸಿದ 79 ಪ್ರಮುಖ ಅಧ್ಯಯನಗಳ ಸಮೀಕ್ಷೆಯ ಆಧಾರದ ಮೇಲೆ, ರಾತ್ರಿ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಲ್ಲಿ ಅಕಾಲಿಕ ಮರಣದ ಅಪಾಯ ಶೇಕಡಾ 14% ಹೆಚ್ಚಾಗಬಹುದು ಎಂಬುದು ಬೆಳಕಿಗೆ ಬಂದಿದೆ. ಅದೇ ರೀತಿ, 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರಲ್ಲಿ ಈ ಅಪಾಯ ಶೇಕಡಾ 34% ರಷ್ಟು ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಅತಿಯಾದ ನಿದ್ರೆಯಿಂದ ಉಂಟಾಗುವ ಪ್ರಮುಖ ಅಡ್ಡಪರಿಣಾಮಗಳು: ಟೈಪ್ 2 ಮಧುಮೇಹ ಹೃದಯ ಸಂಬಂಧಿ ಕಾಯಿಲೆಗಳು ಖಿನ್ನತೆ ಮತ್ತು ಮಾನಸಿಕ ಸಮಸ್ಯೆಗಳು ಬೊಜ್ಜು ಮತ್ತು ತಲೆನೋವು ಇನ್ಫ್ಲಮೇಶನ್, ರೋಗನಿರೋಧಕ ಶಕ್ತಿಯ ಕುಸಿತ ಲೈಫ್ಸ್ಟೈಲ್ ಸಂಬಂಧಿತ ಕಾರಣಗಳು: ಹೆಚ್ಚು ನಿದ್ರಿಸುವವರಲ್ಲಿ ಧೂಮಪಾನ, ವ್ಯಾಯಾಮದ ಕೊರತೆ, ಬೊಜ್ಜು ಅಥವಾ ನಿರಾಸಕ್ತ ಜೀವನಶೈಲಿ ಸಾಮಾನ್ಯ. ಕೆಲವರಿಗೆ ನಿದ್ರೆಯು ಆರೋಗ್ಯ ಸಮಸ್ಯೆಯ ಲಕ್ಷಣವಾಗಿಯೂ ಕಾಣಿಸಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾರ್ವರ್ಡ್ ಅಧ್ಯಯನದ ಪ್ರಕಾರ: ಹಾರ್ವರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವು ಪ್ರತಿದಿನ ಕನಿಷ್ಠ 7 ಗಂಟೆಗಳ ನಿದ್ರೆ ಅಗತ್ಯವಿದೆ ಎಂದು ದೃಢಪಡಿಸುತ್ತದೆ. ಆದರೆ, ನಿದ್ರೆಯ ಪ್ರಮಾಣಕ್ಕಿಂತ ಅದರ ಗುಣಮಟ್ಟವೇ ಹೆಚ್ಚು ಮುಖ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ. ನಿದ್ರೆ ಮಾಡಿದರೂ ದಣಿವಾಗಿದ್ದರೆ ಅಥವಾ ಮನಸ್ಸು ಉತ್ಸಾಹವಾಗಿರದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಶ್ರೇಷ್ಠ. ತಜ್ಞರ ಸಲಹೆ: "ನಿದ್ರೆಯು ಆಹಾರ ಹಾಗೂ ವ್ಯಾಯಾಮದಷ್ಟೇ ಪ್ರಮುಖ ಅಂಶ. ಅದರ ಮಿತಿಯನ್ನು ಮೀರಿದರೂ ಅಥವಾ ಕಡಿಮೆ ಮಾಡಿದರೂ ದೇಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪ್ರತಿದಿನ ಸರಾಸರಿ 7 ರಿಂದ 8 ಗಂಟೆಗಳ ಗುಣಮಟ್ಟದ ನಿದ್ರೆ ಪಡೆಯುವುದು ಆರೋಗ್ಯದ ಮೂಲ ಸುत्र."
ಇತರೆ ಸುದ್ದಿಗಳು