ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಇಂದು ಡಿಸೆಂಬರ್ 2 ರಾಷ್ಟ್ರೀಯ ಪರಿಸರ ಮಾಲಿನ್ಯ ಜಾಗೃತಿ ದಿನ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 02-12-2025

ಇಂದು ಡಿಸೆಂಬರ್ 2 ರಾಷ್ಟ್ರೀಯ ಪರಿಸರ ಮಾಲಿನ್ಯ ಜಾಗೃತಿ ದಿನ

ಮಾನವನ ಆಸೆ ಎಲ್ಲೇ ಮೀರಿ ದುರಾಸೆಯ ಅಂಚಿನಲ್ಲಿ ಬಂದು ನಿಂತಿವೆ. ದಾರ್ಶನಿಕರು ಹೇಳಿರುವಂತೆ ಮಾನವ ಭೂಮಿ ಅಗೆದು ಗೆಣಸು ತಗೆಯುವ ಕಾಲದಲ್ಲಿ ಪ್ರಮಾಣಿಕನಾಗಿದ್ದ. ಯಾವಾಗ ಭೂಮಿ ಅಗೆದು ಚಿನ್ನ ತಗೆಯಲು ಆರಂಭಿಸಿದನೋ ಅಲ್ಲಿಂದಲೇ ಶುರುವಾಯ್ತು ನೋಡಿ ದುರಾಸೆಯ ಯುಗ.

ಅಂದಿನಿಂದ ಮಾನವನ ಲೋಭಿತನ ಆರಂಭವಾಗಿ ಇಂದಿಗೂ ಅದು ರಾಜಾರೋಷವಾಗಿ ನಡೆಯುತ್ತಲೇ ಬಂದಿದೆ‌. ಅದರ ಜೊತೆ ಜೊತೆಗೆ ಇದು ಪರಿಸರ ನಿಸರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದ್ದು, ಬದುಕಲು ಅನುವು ಮಾಡಿಕೊಟ್ಟ ಪರಿಸರವನ್ನೆ ಆಳಲು ಹೊರಟಿರುವುದು ವಿಪರ್ಯಾಸ ಮತ್ತು ದುರಂತ.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಉಕ್ತಿ ಕೇಳಲೇನೋ ಚೆಂದ ಆದರೆ ನಾವೆಂದಾದರೂ ಯೋಚಿಸಿದ್ದೇವಾ? ನಾಳೆನ ಪ್ರಜೆಗಳಿಗೆ ಈ ಪರಿಸರ ನಿಸರ್ಗ ಎಷ್ಟು ಅನಿವಾರ್ಯವೆಂದು.?? ಇಲ್ಲ ಖಂಡಿತ ಇಲ್ಲ ಹಾಗೆ ಯೋಚಿದ್ದೆ ಆದರೆ ಇಂದು ನಾವು ಪರಿಸರ ಜಾಗೃತಿ ದಿನವನ್ನು ಆಚರಿಸಬೇಕಾದ ಅನಿವಾರ್ಯತೆ ಬರುತ್ತಿರಲಿಲ್ಲ. ಈ ಕುರಿತು ಸಾಕಷ್ಡು ಚಲನಚಿತ್ರಗಳು ಬಂದಿವೆ‌ ಅದರಲ್ಲೂ ಮುಖ್ಯವಾಗಿ ನಟ ನಿರ್ದೇಶಕ ಪರಿಸರವಾದಿ ಸುರೇಶ್ ಹೆಬ್ಳಿಕರ್ ಪರಿಸರದ ಕುರಿತು ಸಾಕಷ್ಡು ಜಾಗೃತಿ ಅಭಿಯಾನ ನಡೆಸಿದ್ದಾರೆ. 1998 ರಲ್ಲಿ ಇಕೋ-ವಾಚ್ ಎಂಬ ಎನ್ ಜಿ ಓ ಸಂಸ್ಥೆಯನ್ನ ಸ್ಥಾಪಿಸಿ ಪರಿಸರ ಮತ್ತು ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಲೇ ಬರುತ್ತಿದ್ದಾರೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನೆ ದ್ವಂಸ ಮಾಡುವ ,ಮಾಡುತ್ತಿರುವವರಿಗೇನು ಕಡಿಮೆ ಇಲ್ಲ . ಇಂದು ಜ್ವಲಂತ ಸಾಕ್ಷಿಯಾಗಿ ಕಾಣುತ್ತಿರುವ ಪ್ರಕೃತಿ ವಿಕೋಪ, ಅಕಾಲಿಕ ಮಳೆ ಹವಮಾನ ವೈಪರಿತ್ಯಕ್ಜೆ ಮೂಲ ಕಾರಣವೇ ಪರಿಸರ ನಾಶ. ಪ್ರಕೃತಿ ವಿಲೋಪಕ್ಕೆ ಶಪಿಸುವ ಮನುಷ್ಯನಿಗೆ ಸ್ವತಃ ತಾನು ಮಾಡಿರುವ ಪರಿಸರ ದ್ರೋಹದ ಕುರಿತು ಯಕಃಶಿತ್ ಪಶ್ಚಾತಪವಿಲ್ಲ.

ಹೇಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ ಅದೇ ರೀತಿಯಲ್ಲಿ ಈಗ ಪರಿಸರ ಉಳಿವಿಗಾಗಿ ಹೋರಾಡುವ ಕಾಲ ಸನಿಹಿತವಾಗಿದೆ. ಜಾಗತಿಕ ತಾಪಮಾನದ ಕುರಿತು ವಿಶ್ವದೆಲ್ಲಡೆ ಪರಿಸರ ಜಾಗೃತಿ ಅಭಿಯಾನ ಆರಂಭವಾಗಿದೆ. ಮಾನವ ನಿರ್ಮಿತ ಕೃತಕ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪರಿಸರದ ಕುರಿತು ಕಳವಳ ವ್ಯಕ್ತಪಡಿಸುವ ದಿಗ್ಗಜರು ಆಚೆ ಪರಿಸರಗಳ ಮೇಲೆ ಕ್ರೌರ್ಯ ಎಸೆಗುತ್ತಲೇ ಬಂದಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಪರಿಸರ ಹಾನಿಗೊಳಿಸುವ ಕಾರ್ಯ ಮಾತ್ರ ಸುಸೂತ್ರವಾಗಿ ಸಾಗುತ್ತಲೇ ಇವೆ. ಕೇವಲ ಔಪಚಾರಿಕತೆಯಿಂದ ಕೂಡಿರದ ಪರಿಸರ ಮಾಲಿನ್ಯ ಜಾಗೃತಿ ಪ್ರತಿದಿನವೂ ಆಚರಿಸುವಂತಾಗಲಿ. ಕೊನೆಯ ಪಕ್ಷ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ಪುಣ್ಯದ ಕೆಲಸ ನಮ್ಮಿಂದಲೇ ಆಗಬೇಕಿದೆ.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49029+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49062+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49063+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49091+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49256+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49323+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49444+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49629+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49574+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49741+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49746+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49763+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49760+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49785+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49806+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51264+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51349+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51673+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51678+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52111+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52096+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57055+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57038+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57047+