ಗೋರಾಬಾಳ ಗ್ರಾಮದಲ್ಲಿ ಗಾಡಾ ಬಂಡಿ ಸ್ಪರ್ಧೆ ಉದ್ಘಾಟನೆ
ಸವದತ್ತಿ: ಸವದತ್ತಿ ತಾಲೂಕು ಶಿಂದೋಗಿ ಜಿಲ್ಲಾ ಪಂಚಾಯತಿ ಮತಕ್ಷೇತ್ರದ ಗೋರಾಬಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಗಾಡಾ ಬಂಡಿ ಸ್ಪರ್ಧೆಯನ್ನು ಸವದತ್ತಿ-ಯಲ್ಲಮ್ಮ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವಿಶ್ವಾಸಣ್ಣಾ ವೈದ್ಯ ಅವರ ಅನುಪಸ್ಥಿತಿಯಲ್ಲಿ, ಶಿಂದೋಗಿ ಜಿಲ್ಲಾ ಪಂಚಾಯತಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮಾನ್ಯ ಶ್ರೀ ಡಿ.ಡಿ. ಟೋಪೋಜಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು