“ಟಾಕ್ಸಿಕ್‌ನಲ್ಲಿ ರುಕ್ಮಿಣಿ ವಸಂತ್ ಗ್ಲ್ಯಾಮರ್ ಲುಕ್‌ಗೆ ಫ್ಯಾನ್ಸ್ ಫಿದಾ”
ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಐದನೇ ನಾಯಕಿಯ ಲುಕ್ ಇದೀಗ ಅನಾವರಣಗೊಂಡಿದೆ. ನಟಿ ರುಕ್ಮಿಣಿ ವಸಂತ್ ಗ್ಲ್ಯಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಅವರ ಪಾತ್ರದ ಹೆಸರು ಮೆಲ್ಲಿಸಾ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಈ ಕುರಿತಂತೆ ಟಾಕ್ಸಿಕ್ ಚಿತ್ರತಂಡ ರುಕ್ಮಿಣಿ ವಸಂತ್ ಅವರ ಇಂಟ್ರೊಡಕ್ಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಒಟ್ಟೂ ಐವರು ಪ್ರಖ್ಯಾತ ನಟಿಯರು ಅಭಿನಯಿಸುತ್ತಿದ್ದಾರೆ. ಬಾಲಿವುಡ್ ನಟಿ ಕಿಯಾರಾ ಅಡ್ವಾನಿ, ಬಹುಭಾಷಾ ಸ್ಟಾರ್ ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಮತ್ತು ಇದೀಗ ರುಕ್ಮಿಣಿ ವಸಂತ್ ಅವರನ್ನು ಚಿತ್ರತಂಡ ಪರಿಚಯಿಸಿದೆ.
ಕಳೆದ ಒಂದು ತಿಂಗಳಿನಿಂದ ಯಶ್ ಮತ್ತು ತಂಡ ಹಂತ ಹಂತವಾಗಿ ಸಿನಿಮಾದ ನಟಿಯರನ್ನು ಅನಾವರಣಗೊಳಿಸುತ್ತಾ ಬಂದಿದ್ದು, ಇದೀಗ ಐದನೇ ನಾಯಕಿಯ ಪರಿಚಯದೊಂದಿಗೆ ಸಂಪೂರ್ಣ ನಾಯಕಿಯರ ಪಟ್ಟಿಗೆ ತೆರೆಬಿದ್ದಿದೆ.
ಜನವರಿ 8ರಂದು ಯಶ್ ಅವರ ಹುಟ್ಟುಹಬ್ಬವಿದ್ದು, ಈ ದಿನ ಟೀಸರ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಟೀಸರ್‌ನಲ್ಲಿ ಐವರು ನಾಯಕಿಯರ ಲುಕ್ ಕೂಡ ರಿವೀಲ್ ಆಗುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಿದೆ.
ಇತರೆ ಸುದ್ದಿಗಳು